
27th April 2025
ಮಲ್ಲಮ್ಮ ನುಡಿ ವಾರ್ತೆ
ಭಾಲ್ಕಿ: ಪಟ್ಟಣದಲ್ಲಿ ವಿಶ್ವಗುರು ಬಸವಣ್ಣನವರ ಜಯಂತ್ಯುತ್ಸವ ಅರ್ಥಪೂರ್ಣವಾಗಿ ಆಚರಿಸಲು ಬಸವ ಭಕ್ತರು ಸಿದ್ಧತೆ ಮಾಡಿಕೊಳ್ಳಬೇಕು ಎಂದು ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್ನ ಅಧ್ಯಕ್ಷ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ಹೇಳಿದರು.
ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ ಈಚೆಗೆ ನಡೆದ ಪೂರ್ವಭಾವಿ ಸಭೆಯ ದಿವ್ಯಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
೧೨ನೆಯ ಶತಮಾನದಲ್ಲಿ ಬಸವಣ್ಣನವರು ವಿಶ್ವಕ್ಕೆ ಸಮಾನತೆ ಸಂದೇಶ ಸಾರಿದ್ದರು. ಜಾತಿರಹಿತ ಸಮಸಮಾಜ ಕಟ್ಟಿದ್ದರು. ಮೇಲುಕೀಳು ಎನ್ನದೇ ಅನುಭವ ಮಂಟಪದಲ್ಲಿ ಎಲ್ಲ ವರ್ಗದವರಿಗೆ ಆಶ್ರಯ ನೀಡಿದ್ದರು.
ಅಂತಹ ಮಹಾತ್ಮರ ವಿಚಾರಧಾರೆ ಜಗದಗಲ ತಲುಪಿಸುವ ಜವಾಬ್ದಾರಿ ಎಲ್ಲ ಬಸವ ಭಕ್ತರ ಮೇಲಿದೆ.
ಪಟ್ಟಣದಲ್ಲಿ ಏ.೩೦ ರಂದು ಆಚರಿಸಲಾಗುವ ಬಸವ ಜಯಂತಿಗೆ ಹಿಂದಿಗಿAತಲೂ ಹೆಚ್ಚಿನ ಮೆರಗು ಬರಬೇಕು. ಆ ನಿಟ್ಟಿನಲ್ಲಿ ಎಲ್ಲರೂ ಸಿದ್ಧತೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ನೇತೃತ್ವ ವಹಿಸಿದ್ದರು. ಈ ಸಂದರ್ಭದಲ್ಲಿ ಪುರಸಭೆ ಮಾಜಿ ಅಧ್ಯಕ್ಷರಾದ ಸಿದ್ರಾಮಪ್ಪ ವಂಕೆ, ಚಂದ್ರಕಾAತ ಪಾಟೀಲ್, ಪ್ರಮುಖರಾದ ಪ್ರಕಾಶ ಮಾಶೆಟ್ಟೆ, ಕಿರಣ ಖಂಡ್ರೆ, ಅಶೋಕ ಬಾವುಗೆ, ಡಾ.ಅಮಿತ ಅಷ್ಟೂರೆ, ಗುಂಡಪ್ಪ ಸಂಗಮಕರ್, ಸಂತೋಷ ಹಡಪದ, ರೇಖಾ ಮಹಾಜನ, ಮಲ್ಲಮ್ಮ ಆರ್ ಪಾಟೀಲ್, ಸುನಿತಾ ಮಮ್ಮಾ ಸೇರಿದಂತೆ ಹಲವರು ಇದ್ದರು.
ಸ್ವಾಗತ ಸಮಿತಿಗೆ ಆಯ್ಕೆ
ಇದೇವೇಳೆ ಬಸವ ಜಯಂತಿ ಅರ್ಥಪೂರ್ಣ ಆಚರಣೆಗೆ ಸ್ವಾಗತ ಸಮಿತಿ ರಚಿಸಲಾಯಿತು. ಸ್ವಾಗತ ಸಮಿತಿ ಅಧ್ಯಕ್ಷರನ್ನಾಗಿ ಶಿವು ಲೋಖಂಡೆ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಆಯ್ಕೆಯಾದ ಶಿವು ಲೋಖಂಡೆ ಅವರನ್ನು ಉಭಯ ಪೂಜ್ಯರು ಸನ್ಮಾನಿಸಿ, ಆಶೀರ್ವದಿಸಿದರು.
ವಿಶ್ವ ಮಲೇರಿಯಾ ದಿನ ಜಾಗೃತಿ ಜಾಥಾ ಕಾರ್ಯಕ್ರಮ ಯಾವುದೇ ಜ್ವರವಿರಲಿ ರಕ್ತ ಪರಿಕ್ಷೆ ಮಾಡಿಸಿಕೊಳ್ಳಿ, ಸಂಪೂರ್ಣ ಚಿಕಿತ್ಸೆ ಪಡೆಯಿರಿ ಮಲೇರಿಯಾದಿಂದ ಮುಕ್ತರಾಗಿ